ತನ್ನ ಮೊದಲ ಸಾರ್ವಜನಿಕ ಶೇರುಗಳ ಕೊಡುಗೆ ಐಪಿ ಒ ಮಾರ್ಗಸೂಚಿ ಬಾಗವಾಗಿ ತಂತ್ರಜ್ಞಾನ ವೇದಿಕೆಗಳಲ್ಲಿ
ತನ್ನ ಮೊದಲ ಸಾರ್ವಜನಿಕ ಷೇರುಗಳ ಕೊಡುಗೆ(ಐಪಿಒ) ಮಾರ್ಗಸೂಚಿಯ ಭಾಗವಾಗಿ ತಂತ್ರಜ್ಞಾನ ವೇದಿಕೆಗಳಲ್ಲಿ ವ್ಯೂಹಾತ್ಮಕ ಹೂಡಿಕೆಯನ್ನು ಪ್ರಕಟಿಸಿದ ಸಿಐಎಎಲ್ ಸಮೂಹ
~ ಪ್ರತಿಭೆ ಮೌಲ್ಯೀಕರಣ ಮತ್ತು ಅಭಿವೃದ್ದಿಗಾಗಿ ಭಾರತದ ಮುಂಚೂಣಿಯ ಮಾನವ ಸಂಪನ್ಮೂಲ ತಂತ್ರಜ್ಞಾನ ವೇದಿಕೆಯಾದ ಜಾಂಬೆನಲ್ಲಿ ವ್ಯೂಹಾತ್ಮಕ ಹೂಡಿಕೆ
~ ಉದ್ಯೋಗಾವಕಾಶ ಪರಿಸರ ವ್ಯವಸ್ಥೆಯ ನಾಲ್ಕು ಸ್ತಂಭಗಳಾದ ವಿದ್ಯಾರ್ಥಿ, ಬೋಧನಾ ಸಿಬ್ಬಂದಿ, ವಿದ್ಯಾಸಂಸ್ಥೆ ಮತ್ತು ಉದ್ಯಮಗಳ ನಡುವೆ ಸಂಪರ್ಕ ಸೃಷ್ಟಿಸುವ ಪ್ರೋಸ್ಕಲ್ಪ್ಟ್ ಎಂಬ ತಂತ್ರಜ್ಞಾನ ವೇದಿಕೆಯನ್ನು ಆರಂಭಿಸಿದೆ.
~ ಮೊಬೈಲ್ ಆಧಾರಿತ ನೇಮಕಾತಿ ವೇದಿಕೆ ಜೊತೆಗಿನ ಎಚ್‌ಆರ್ ಸ್ಯೂಟ್ ಆದ ಎಚ್‌ಫ್ಯಾಕ್ಟರ್ 2.0ವನ್ನು ಆರಂಭಿಸಿದೆ.
~22-23ರ ಸಾಲಿನ ಪ್ರಥಮ ಅರ್ಧವಾರ್ಷಿಕ ಅವಧಿಗೆ ವರ್ಷದಿಂದ ವರ್ಷಕ್ಕೆ ಶೇ.80ರಷ್ಟು ಆದಾಯದಲ್ಲಿನ ಬೆಳವಣಿಗೆಯನ್ನು ದಾಖಲಿಸಿದೆ. ಇದು ಸಿಬ್ಬಂದಿ ನೇಮಕಾತಿ ಉದ್ಯಮದ ಬೆಳವಣಿಗೆ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಬೆಂಗಳೂರು, ಡಿಸೆಂಬರ್ 01, 2022 :- ಭಾರತದಲ್ಲಿ ಕಾರ್ಯಪಡೆ ಮತ್ತು ಕೌಶಲ್ಯ ಪರಿಹಾರ ಕ್ಷೇತ್ರದ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿರುವ ಸಿಐಎಎಲ್ ಎಚ್‌ಆರ್ ಸರ್ವೀಸಸ್ ಈಗ ತನ್ನ ಮೊದಲ ಸಾರ್ವಜನಿಕ ಷೇರುಗಳ ಕೊಡುಗೆ(ಐಪಿಒ)ಯತ್ತ ಸಾಗುವ ಯೋಜನೆಗಳ ನಿಟ್ಟಿನಲ್ಲಿ ಆರ್ಗ್ಯಾನಿಕ್ ಮತ್ತು ಇನ್ಯಾರ್ಗಾನಿಕ್ ಬೆಳವಣಿಗೆಗಳ ಮೂಲಕ ತನ್ನ ವಿಸ್ತರಣಾ ಯೋಜನೆಯಲ್ಲಿ ದಾಪುಗಾಲು ಇಟ್ಟಿದೆ.
ಇತರೆ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡು ಬೆಳೆಯುವ ಇನ್ಯಾರ್ಗಾನಿಕ್ ಬೆಳವಣಿಗೆಯ ಮಾರ್ಗದಲ್ಲಿ ಸಿಐಎಎಲ್ ಇಂದು ವ್ಯೂಹಾತ್ಮಕ ಹೂಡಿಕೆಯನ್ನು ಪ್ರಕಟಿಸಿದೆ. ಸಂಸ್ಥೆ ನೆಕ್ಸ್ಟ್ ಲೀಪ್ ಕೆರಿಯರ್ ಸಲ್ಯೂಷನ್ಸ್ ಪ್ರೆöÊವೇಟ್ ಲಿಮಿಟೆಡ್(ಬ್ರಾಂಡ್ ಹೆಸರು : ಜಾಂಬೆ)ನಲ್ಲಿ ಶೇ.100ರಷ್ಟು ಈಕ್ವಿಟಿ ಪಾಲು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಎಚ್‌ಆರ್ ಸೇವೆಗಳ ಕ್ಷೇತ್ರದಲ್ಲಿ ತನ್ನ ಕೊಡುಗೆಯನ್ನು ವಿಸ್ತರಿಸುವ ವ್ಯೂಹಾತ್ಮಕ ದೃಷ್ಟಿಕೋನದ ಭಾಗ ಈ ಸ್ವಾಧೀನವಾಗಿರುತ್ತದೆ. ಈ ಸ್ವಾಧೀನದೊಂದಿಗೆ ಸಿಐಎಎಲ್ ಸಮೂಹ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಾರ್ಯಪಡೆ ಪರಿಹಾರಗಳ ಕಂಪನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ.
ಜಾಂಬೆಯ ತಂತ್ರಜ್ಞಾನ ಪರಿಹಾರಗಳನ್ನು 500ಕ್ಕೂ ಹೆಚ್ಚಿನ ಅತ್ಯಂತ ಪ್ರಮುಖ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಅದ್ಭುತವಾದ ವ್ಯವಸ್ಥಾಪಕರು ಮತ್ತು ನಾಯಕರನ್ನು ಗುರುತಿಸಿ ನಿರ್ಮಿಸಲು ಮತ್ತು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಈ ಸಂಸ್ಥೆಗಳು ಜಾಂಬೆಯ ಪರಿಹಾರಗಳನ್ನು ಬಳಸಿಕೊಳ್ಳುತ್ತಿವೆ. ಪ್ರತಿ ವರ್ಷ ಜಾಂಬೆಯ ಮೌಲ್ಯೀಕರಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ 2,00,000ಕ್ಕೂ ಹೆಚ್ಚಿನ ಸಂಖ್ಯೆಯ ವ್ಯವಸ್ಥಾಪಕರು ಮತ್ತು ನಾಯಕರು ಸಾಗುತ್ತಿರುತ್ತಾರೆ. `ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್’(ಭಾರತದಲ್ಲಿ ಜಗತ್ತಿಗಾಗಿ ತಯಾರಾದ) ವೇದಿಕೆ ಇದಾಗಿದ್ದು, ವ್ಯವಹಾರ ಮನಃಶಾಸ್ತçಜ್ಞರು, ಇಂಜಿನಿಯರ್‌ಗಳು, ಉತ್ಪನ್ನ ಉದ್ಯಮಶೀಲರ ತಂಡ ಇದನ್ನು ತಯಾರಿಸಿದೆ. ಎಚ್‌ಆರ್ 40 ಅಂಡರ್ 40 ಉಪಕ್ರಮ, ಪೈ ಕ್ಯಾಪಿಟಲ್ ಸೇರಿದಂತೆ ದೃಢವಾದ ಎಚ್‌ಆರ್ ಸಮುದಾಯದ ಸಂಪರ್ಕವನ್ನು ಜಾಂಬೆ ಹೊಂದಿದೆ. ಲೆಗಾಲಾಜಿಕ್ ಈ ವ್ಯವಹಾರದ ಮೂಲಕ ಜಾಂಬೆಗೆ ಸಲಹಾ ಸೇವೆ ನೀಡಿದೆ. ಅಲ್ಲದೆ, ಸಿಐಇಎಲ್ ಅನ್ನು ನೋವೊಜ್ಯೂರಿಸ್ ಪ್ರತಿನಿಧಿಸಿದೆ.
22-23ರ ಸಾಲಿನ ಮೊದಲ ಅರ್ಧ ವಾರ್ಷಿಕ ಅವಧಿಗೆ ವರ್ಷದಿಂದ ವರ್ಷಕ್ಕೆ ಶೇ.80ರಷ್ಟು ಆದಾಯದ ಬೆಳವಣಿಗೆಯನ್ನು ದಾಖಲಿಸಿರುವ ಸಿಐಇಎಲ್ ತನ್ನ ಜಾಗತಿಕ ಹೆಜ್ಜೆ ಗುರುತನ್ನು ಹಾಗೂ ಸೇವಾ ಕೊಡುಗೆಗಳನ್ನು ವಿಸ್ತರಿಸುವುದರ ಮೂಲಕ ಅರ್ಗಾನಿಕ್ ಬೆಳವಣಿಗೆಯ ಪ್ರಯಾಣವನ್ನು ರೂಪಿಸುತ್ತಿದೆ. ಪ್ರಸ್ತುತ 50 ಸ್ಥಳಗಳಲ್ಲಿ 74 ಕಚೇರಿಗಳನ್ನು ಸಿಐಇಎಲ್ ನಡೆಸುತ್ತಿದ್ದು, ಮತ್ತಷ್ಟು ವಿಸ್ತರಣೆಯನ್ನು ಮುಂದುವರಿಸಿದೆ.
ಇತ್ತೀಚೆಗೆ ಪರಿಚಯಿಸಲಾದ ನೂತನ ಸೇವಾ ಕೊಡುಗೆಗಳು ಇಂತಿವೆ:
• ತೈಲ ಮತ್ತು ಅನಿಲ, ವಿದ್ಯುತ್, ಪ್ರಕ್ರಿಯೆ ಮತ್ತು ಶಕ್ತಿ ಕ್ಷೇತ್ರಗಳಲ್ಲಿ ವಿಶೇಷ ನೇಮಕಾತಿ ಮತ್ತು ಸಿಬ್ಬಂದಿ ಅಗತ್ಯಗಳನ್ನು ಪೂರೈಸಲು ಇಪಿಸಿ ಸ್ಟಾಫಿಂಗ್ ವಿಭಾಗವನ್ನು ಆರಂಭಿಸಿದೆ.
• ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಅಡಿಯಲ್ಲಿ ಎನ್‌ಎಪಿಎಸ್(ರಾಷ್ಟಿçÃಯ ಅಪ್ರೆಂಟಿಸ್ ಪ್ರೋತ್ಸಾಹನಾ ಯೋಜನೆ) ಅಡಿ ಸೇವೆಗಳನ್ನು ಸಾದರಪಡಿಸುವುದನ್ನು ಆರಂಭಿಸಿದೆ.
• ಎಸ್‌ಎಲ್‌ಎ ಆಧಾರಿತ ಪ್ಲಗ್ ಎಂಡ್ ಪ್ಲೇ ಪರಿಹಾರಗಳ ಮೂಲಕ ತಮ್ಮ ಐಟಿ ಕಾರ್ಯಾಚರಣೆಗಳನ್ನು ಗರಿಷ್ಠವಾಗಿಸಲು ಕಂಪನಿಗಳಿಗೆ ನೆರವಾಗಲು ವೇಗವರ್ಧಿತ ನಿರ್ವಹಣಾ ಸೇವೆಗಳ ಕಾರ್ಯಕ್ರಮಗಳು.
• ಅಭ್ಯರ್ಥಿಗಳನ್ನು ತಲುಪುವಲ್ಲಿ ನಮ್ಮ ಕಾರ್ಯವನ್ನು ವಿಸ್ತರಿಸಲು ಭಾರತದ ಮೊದಲ ಕೌಶಲ್ಯ ತಂತ್ರಜ್ಞಾನ ವೇದಿಕೆ - ಸ್ಕಿಲ್‌ಟೆಕ್ ಪ್ಲಾಟ್‌ಫಾರ್ಮ್ ಆರಂಭಿಸಲಾಗಿದ್ದು, ಇದರೊಂದಿಗೆ ಸಿಬ್ಬಂದಿ ನೇಮಕ ವ್ಯವಹಾರದಲ್ಲಿ ಆದೇಶ ಪರಿವರ್ತನೆಯನ್ನು ಹೆಚ್ಚಿಸಲು ಅಲ್ಲದೆ, ಉದ್ಯೋಗದಾತರು ಹುದ್ದೆಗಳನ್ನು ಪೋಸ್ಟ್ ಮಾಡುವುದಕ್ಕೆ ಆಕರ್ಷಿಸಲು ಮತ್ತು ಅರ್ಜಿಗಳನ್ನು ಸೃಷ್ಟಿಸಲು ಕೂಡ ಈ ಕ್ರಮ ಕೈಗೊಳ್ಳಲಾಗಿದೆ.
• ಉನ್ನತ ತಂತ್ರಜ್ಞಾನದ ಉನ್ನತ ಸ್ಪರ್ಶದ ಉಪಕ್ರಮವಾದ ಸಿಐಇಎಲ್ ರ‍್ಯಾಪಿಡ್ ಅನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಸ್ಟಾರ್ಟ್ಅಪ್‌ಗಳ ನೇಮಕಾತಿ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಪರಿಚಯಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಿಐಇಎಲ್ ಗ್ರೂಪ್ ಮತ್ತು ಮಾ ಫೋಯಿ ಗ್ರೂಪ್‌ನ ಕಾರ್ಯನಿರ್ವಾಹಕ ಚೇರ್‌ಪರ್ಸನ್ ಮತ್ತು ನಿರ್ದೇಶಕರಾದ ಕೆ. ಪಾಂಡಿಯರಾಜನ್, ಸಿಐಇಎಲ್ ಎಚ್‌ಆರ್ ಸರ್ವೀಸಸ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಿತ್ಯಾ ನಾರಾಯಣ್ ಮಿಶ್ರಾ, ನೆಕ್ಸ್ಟ್ ಲೀಪ್ ಕೆರಿಯರ್ ಸಲ್ಯೂಷನ್ಸ್(ಜಾಂಬೆ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹಿತ್ ಗುಂಡೇಚ, ಸಿಐಇಎಲ್ ಸ್ಕಿಲ್ಸ್ ಅಂಡ್ ಕೆರೀಯರ್ಸ್ ಮತ್ತು ಮಾಫೋಯಿ ಸ್ಟ್ರಾಟಜಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕೃಷ್ಣನ್ ಮತ್ತು ಮತ್ತಿತರು ಪಾಲ್ಗೊಂಡಿದ್ದರು

Comments
Post a Comment