5000ಸಾವಿರ ರಾಜ್ಯ ವಿದ್ಯುತ್ ಗುತ್ತಿಗೆದಾರರಿಂದ ಬೃಹತ್ ಪ್ರತಿಭಟನೆ
*5000ಸಾವಿರ ರಾಜ್ಯ ವಿದ್ಯುತ್ ಗುತ್ತಿಗೆದಾರರಿಂದ ಬೃಹತ್ ಪ್ರತಿಭಟನೆ*
*ವಿದ್ಯುತ್ ಮೀಟರ್ ಮತ್ತು ಉಪಕರಣಗಳನ್ನು ಕುತ್ತಿಗೆಗೆ ಹಾಕಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ*
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಹಲವಾರು ಬೇಡಿಕೆಗಳನ್ನು ಅಗ್ರಹಿಸಿ .
ಫ್ರೀಡಂ ಪಾರ್ಕ್ ಅವರಣದಲ್ಲಿ
ಗೌ.ರಾಜ್ಯಾಧ್ಯಕ್ಷರಾದ ಸಿ.ರಮೇಶ್ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
*ರಾಜ್ಯಾಧ್ಯಕ್ಷರಾದ ಸಿ.ರಮೇಶ್ ರವರು* ಮಾತನಾಡಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘವು 100ವರ್ಷಗಳ ಇತಿಹಾಸವಿದೆ.
ವಿದ್ಯುತ್ ಗುತ್ತಿಗೆದಾರರ ಸಂಕಷ್ಟ,ಸಮಸ್ಯೆಗಳಿಗೆ ಸಂಘವು ಸದಕಾಲ ಶ್ರಮಿಸುತ್ತಿದೆ.
ರಾಜ್ಯದಲ್ಲಿ 30ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದು ಅವರನ್ನ ನಂಬಿಕೊಂಡು 10ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ .
ಹಾಲಿ ಸಣ್ಣ ಸಣ್ಣ ಕಾಮಗಾರಿಗಳಿ ಕ್ರೂಢೀಕರಿಸಿ ಬೃಹತ್ ಟೆಂಡರ್ ಕರೆದಿರುವುದನ್ನು ರದ್ದುಪಡಿಸಿ ಸರ್ಕಾರದ ಆದೇಶ ಸಂ.ಸಂ.ವ.ಶಾ.ಇ.25 ಶಾಸನ 2019 ದಿನಾಂಕ 27.04.2020 & ಎನರ್ಜಿ/793/ವಿಎಸ್‌ಸಿ/2020 1 ಲಕ್ಷದುಣದ 5 ಲಕ್ಷದ ವರೆಗೆ ಇರುವ ಆದೇಶವನ್ನು ಜಾರಿಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಕೊಡಬೇಕು.
ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ಬೆಳಕು ಯೋಜನೆಯ ಬೆಸ್ಕಾಂ ನೀಡಿರುವ ದರವನ್ನು ಎಲ್ಲಾ ಎಸ್ಕಾಂಗಳಿಗೂ ಜಾರಿಗೊಳಿಸುವುದು ಮತ್ತು ಬೆಳಕು ಯೋಜನೆ ಕಾಮಗಾರಿ ನಿರ್ವಹಿಸಿರುವ ಬಿಲ್‌ಗಳಿಗೆ ಬಜೆಟ್ (ಹಣಕಾಸು)ನ್ನು ಕೊಡುವುದು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತತ್ಕಾಲ್ (ಶೀಘ್ರ ವಿದ್ಯುತ್) ಯೋಜನೆಗೆ ಕಳೆದ ಒಂದು ವರ್ಷದಲ್ಲಿ ಯಾವುದೇ ಅನುದಾನವನ್ನು ನೀಡಿರುವುದಿಲ್ಲ. ಲಕ್ಷಾಂತರ ರೈತರಿಗೆ ಅನಾನುಕೂಲವಾಗಿರು ವುದರಿಂದ ಕೂಡಲೇ ಬಜೆಟ್ ಕೊಡುವುದು.
ಗ್ರಾಹಕರಿಗೆ ಅನಧಿಕೃತ ಬಡಾವಣೆಗಳಿಗೆ ಐಎಫ್‌ಎಸ್‌ಸಿ (ಅಭಿವೃದ್ಧಿ ಶುಲ್ಕ) ಹೆಚ್ಚುವರಿಯಾಗಿ ಎಸ್ಕಾಂಗಳು ಸಂಗ್ರಹಿಸುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿರು
ವುದರಿಂದ ಹಿಂದೆ ಇದ್ದ ಆದೇಶದಂತೆ ಹಣವನ್ನು ಸಂಗ್ರಹಿಸುವುದು.
ಮುಖ್ಯಮಂತ್ರಿಗಳು,ಇಂಧನ ಸಚಿವರು ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳನ್ನು ಕೊಡಲೆ ಪರಿಹಾರಿಸಬೇಕು ಎಂದು ಹೇಳಿದರು.
ಪದಾಧಿಕಾರಿಗಳಾದ ಎಂ.ಎನ್.ರಮೇಶ್,ಊರ್ಬನ್ ಪಿಂಟೊ,ಚಂದ್ರಬಾಬು,ಅನ್ನರ್ ಮಿಯಾ,ಶಿವಾನಂದ್ ಬಾಲಪ್ಪನವರ್,ಚಂದ್ರಬಾಬುರವರು ಪಾಲ್ಗೊಂಡಿದ್ದರು.

Comments
Post a Comment