ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶೇಷಾದ್ರಿಪುರಂ ವೈದ್ಯರು, 27 ವಾರಗಳ ಗರ್ಭಾವಸ್ಥೆಯಲ್ಲಿ ದೇಹದ ಬಹು ಅಂಗಗಳ ಅಸ್ವಸ್ಥತೆ ಹೊಂದಿದ್ದ 683 ಗ್ರಾಂ ತೂಕದ ಅವಧಿಪೂರ್ವ ಮಗುವಿನ ಯಶಸ್ವಿ ಹೆರಿಗೆ
ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶೇಷಾದ್ರಿಪುರಂ ವೈದ್ಯರು, 27 ವಾರಗಳ ಗರ್ಭಾವಸ್ಥೆಯಲ್ಲಿ ದೇಹದ ಬಹು ಅಂಗಗಳ ಅಸ್ವಸ್ಥತೆ ಹೊಂದಿದ್ದ 683 ಗ್ರಾಂ ತೂಕದ ಅವಧಿಪೂರ್ವ ಮಗುವಿನ ಯಶಸ್ವಿ ಹೆರಿಗೆ
* 683 ಗ್ರಾಂ ತೂಕದ ಹೆಣ್ಣು ಮಗು ತುರ್ತು ಐSಅS ವಿಧಾನದ ಮೂಲಕ ಜನಿಸಿತು
* ಶಿಶುವಿಗೆ ಉಸಿರಾಟದ ತೊಂದರೆ ಸಿಂಡ್ರೋಮ್ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಹೊಂದಿತ್ತು.
ಬೆಂಗಳೂರು, 7 ಡಿಸೆಂಬರ್ 2022: ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು, 27 ವಾರಗಳ ಗರ್ಭಾವಸ್ಥೆಯಲ್ಲಿದ್ದ ಮತ್ತು ಕೇವಲ 683 ಗ್ರಾಂಗಳಷ್ಟು ಮಾತ್ರ ಜನನ ತೂಕವನ್ನು ಹೊಂದಿ ಅವಧಿಪೂರ್ವ ಮಗುವಿನ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 56 ವರ್ಷದ ತಾಯಿ ಐವಿಎಫ್ ಮೂಲಕ ಮಗುವಿಗೆ ಗರ್ಭ ಧರಿಸಿದ್ದರು, ಅಧಿಕ ರಕ್ತದೊತ್ತಡ ಮತ್ತು ಇತರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು. ತಾಯಿಯ ಆರೋಗ್ಯ ಸ್ಥಿತಿಯು ಮಗುವಿಗೆ ಅವಧಿಪೂರ್ವ ಹೆರಿಗೆಗೆ ಕಾರಣವಾಯಿತು.
ಅಕಾಲಿಕವಾಗಿ ಜನಿಸಿದ ನಂತರ, ಮಗು ಶೀಘ್ರವಾಗಿ ಬಗೆಹರಿಸಲೇಬೇಕಿದ್ದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿತ್ತು. ಪ್ರಸವಪೂರ್ವ ಅವಧಿಯಲ್ಲಿ, ಮಗುವಿಗೆ ಫಾಲೋಟ್ಸ್ ಟೆಟ್ರಾಲಜಿ (ಈಚಿಟಟoಣ's ಖಿeಣಡಿoಟogಥಿ)ಎಂಬ ಪ್ರಮುಖ ಜನ್ಮಜಾತ ಹೃದಯ ಸಮಸ್ಯೆ ಇರುವುದು ಪತ್ತೆಯಾಯಿತು. ಜನನದ ನಂತರ, ಮಗುವಿಗೆ ಉಸಿರಾಟದ ಅಪಕ್ವತೆಗಾಗಿ ವೆಂಟಿಲೇಟರ್‍ನಲ್ಲಿ ಇರಿಸಬೇಕಾಯಿತು. ಮಗುವು ತೀವ್ರವಾದ ಕರುಳಿನ ಸೋಂಕು ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಪ್ರಿಮೆಚ್ಯೂರಿಟಿಯ ರೆಟಿನೋಪತಿಯಂತಹ ಇತರೆÀ ಅಕಾಲಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಹೊಂದಿತ್ತು.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಂiÀÀ ಹಿರಿಯ ಸಮಾಲೋಚಕ ನವಜಾತ ಶಿಶು ಮತ್ತು ಮಕ್ಕಳ ತಜ್ಞ ವೈದ್ಯ ಡಾ. ಪ್ರಶಾಂತ್ ಎಸ್ ಅರಸ್ ಅವರು ಮಾತನಾಡಿ, "ಈ ಅಕಾಲಿಕ ಪ್ರಕರಣವು ತೀರಾ ಸಂಕೀರ್ಣದ್ದಾಗಿತ್ತು ಮತ್ತು ಸಕಾಲಿಕವಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಪರಿಹರಿಸದಿದ್ದರೆ ದೀರ್ಘಾವಧಿಯ ಸಮಸ್ಯೆಗಳನ್ನು ಉಂಟುಮಾಡಬಹುದಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿತ್ತು. ಉದಾಹರಣೆಗೆ, ಅಕಾಲಿಕ ಶಿಶುಗಳಲ್ಲಿ ಕುರುಡುತನವನ್ನು ಉಂಟುಮಾಡುವ ಪ್ರಿಮೆಚ್ಯುರಿಟಿಯ ರೆಟಿನೋಪತಿಯನ್ನು ಲೇಸರ್ ಚಿಕಿತ್ಸೆಯೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು, ಇದರ ಪರಿಣಾಮವಾಗಿ ಮಗುವಿಗೆ ದೃಷ್ಟಿ ಸಾಮಾನ್ಯವಾಗಿ ಇರುತ್ತದೆ. ಆದಾಗ್ಯೂ, ಜನ್ಮಜಾತ ಹೃದಯ ಕಾಯಿಲೆಯ ಸ್ಥಿತಿಯು ಭವಿಷ್ಯದಲ್ಲಿ ಶಸ್ತ್ರಚಿಕಿತ್ಸೆಯ ರೂಪದಲ್ಲಿ ಹಸ್ತಕ್ಷೇಪದ ಅಗತ್ಯವಿರುತ್ತದೆ. ಒಟ್ಟಿನಲ್ಲಿ ಮಗು ಅಪಾಯದಿಂದ ಪಾರಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದೆ. ನಾವು ಈ ಪ್ರಕರಣವನ್ನು ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಬಗ್ಗೆ ಮತ್ತು ಮಗುವಿಗೆ ಹಾಗೂ ಅದರ ತಾಯಿಗೆ ಆರೋಗ್ಯಕರ ಜೀವನವನ್ನು ಸಕ್ರಿಯಗೊಳಿಸಿದ ಬಗ್ಗೆ ನಮಗೆ ಅತೀವ ಸಂತಸ ಇದೆ" ಎಂದು ಹೇಳಿದರು.
ಈ ನವಜಾತ ಶಿಶು ಪ್ರಕರಣದ ಯಶಸ್ಸಿನ ಕುರಿತು ಮಾತನಾಡಿದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ, ಸಿಒಒ ಶ್ರೀ ಉದಯ್ ದಾವ್ಡಾ, ''ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ವೈದ್ಯರು ಮಕ್ಕಳಲ್ಲಿ ಅಪರೂಪದ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಆರಂಭಿಕ ರೋಗನಿರ್ಣಯದೊಂದಿಗೆ, ರೋಗಿಗಳಲ್ಲಿ ವಿಪರೀತ ಮತ್ತು ಅಪರೂಪದ ಪ್ರಕರಣಗಳನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಪ್ರಕರಣವು ನಮ್ಮ ಪರಿಣತಿ ಮತ್ತು ಜನರ ಸೇವೆ ಬಗೆಗಿನ ಬದ್ಧತೆಗೆ ಉದಾಹರಣೆಯಾಗಿದೆ. ಶೇಷಾದ್ರಿಪುರಂನ ಅಪೊಲೊ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ತಂಡಕ್ಕೆ ಇದು ನಿಜವಾದ ಯಶಸ್ಸು" ಎಂದು ಬಣ್ಣಿಸಿದರು.
ಪ್ರಸ್ತುತ, ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ, ನವಜಾತ ಶಿಶುಗಳ ತೀವ್ರ ನಿಗಾ ಘಟಕವು ಹಲವಾರು ಅಕಾಲಿಕ ಮತ್ತು ಹೆಚ್ಚಿನ ಅಪಾಯದ ಜನನ ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಈ ಕೇಂದ್ರವು ಹೃದ್ರೋಗ ತಜ್ಞರು, ತೀವ್ರ ನಿಗಾ ಘಟಕಗಳು, ವಯಸ್ಕರ ತೀವ್ರ ನಿಗಾ ಘಟಕ ಮತ್ತು ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳನ್ನು ಒಳಗೊಂಡಿರುವ ಹೆಚ್ಚಿನ-ಅಪಾಯದ ತಾಯಿಯ ಹೆರಿಗೆಯಲ್ಲಿ ಅನುಭವಿ ವೈದ್ಯಕೀಯ ತಂಡದ ಮೂಲಸೌಕರ್ಯ ಮತ್ತು ಪರಿಣತಿಯನ್ನು ಹೊಂದಿದೆ.

Comments
Post a Comment