ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಸಭಾಂಗಣದಲ್ಲಿ ಮಾನ್ಯ
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಸಭಾಂಗಣದಲ್ಲಿ ಮಾನ್ಯಜಿಲ್ಲಾಧಿಕಾರಿಗಳಾದ ಶ್ರೀಮತಿ ಆರ್ ಲತಾ , IAS. ರವರು ಅಧಿಕೃತವಾಗಿ ಬಿಡುಗಡೆ ಮಾಡಿದರು.
ನಂತರ ಅವರು ಮಾತನಾಡುತ್ತಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಮುಖ್ಯವಾಗಿ ಕೋವಿಡ್ ನಂತಹ ಮಾರಕ ಕಾಯಿಲೆಗಳ ವಿರುದ್ಧ ಹೋರಾಟದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪಾತ್ರ ಮೆಚ್ಚುವಂಥದ್ದು ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಅವರ ಬದ್ಧತೆ ಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ತದನಂತರ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದ ಡಾಕ್ಟರ್ ವಿಜೇಂದ್ರ ಬಿ ಕೆ ರವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದಂತಹ ಪ್ರಧಾನ ಮಂತ್ರಿ ಆರೋಗ್ಯ ಯೋಜನೆ, ಕುಟುಂಬ ಕಲ್ಯಾಣ ಯೋಜನೆ, ಸಾರ್ವತ್ರಿಕ ಲಸಿಕ ಕಾರ್ಯಕ್ರಮ ಹಾದಿಯಾಗಿ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಮ್ಮ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿರುತ್ತಾರೆ ಎಂದು ಸಭೆಗೆ ತಿಳಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಬಿಜಿ ರವರು ಯಾವುದೇ ರಾಷ್ಟ್ರೀಯ ವಿಪತ್ತು ಇದ್ದರೂ ಕೂಡ ಸಂಘದ ಸರ್ವ ಸದಸ್ಯರು ದೇಶ ಸೇವೆಗಾಗಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿ ಜಿಲ್ಲಾಡಳಿತದ ನಿರ್ದೇಶನಗಳಿಗೆ ಬದ್ಧರಾಗಿರುತ್ತವೆ ಎಂದು ಸಮಸ್ತ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪರವಾಗಿ ತಿಳಿಸಿದರು. ಅದೇ ರೀತಿ ಸಂಘವು ಅನೇಕ ಸಮಾಜಮುಖಿ ಕೆಲಸಗಳಾದ ಆರೋಗ್ಯ ಕೇಂದ್ರಗಳ ಸ್ವಚ್ಛತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.
ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಕೆ ಆರ್ ರವರು ಕಾರ್ಯಕ್ರಮ ನಿರೂಪಿಸಿ ರಾಜ್ಯದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘವು ಮಾದರಿಯಾಗಿರುವುದಾಗಿ ತಿಳಿಸಿದರು..
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್, ಖಜಾಂಚಿಗಳಾದ ಶ್ರೀ ಉಮೇಶ್, ಪದಾಧಿಕಾರಿಗಳಾದಂತಹ ಶ್ರೀ ಅಮರನಾಥ್, ಶ್ರೀ ನಾರಾಯಣಗೌಡ, ಶ್ರೀ ಅಮರೇಶ್, ಶ್ರೀಮತಿ ಅಶ್ವಿನಿ ಶ್ರೀಮತಿ ಪರಿಮಳ, ಶ್ರೀ ಸಾನಂದ, ಶ್ರೀಮತಿ ಆವಂತಿ ಶ್ರೀಮತಿ ಶರಣಮ್ಮ ರವರು ಕ್ಯಾಲೆಂಡರ್ ಮುದ್ರಣದ ಸೇವಾಕರ್ಥಕರಾದ ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫೋರಂ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬಿಪಿ ರವರಿಗೆ ಹಾಗೂ ಇತರೆ ಗೌರವಾನ್ವಿತ ಗಣ್ಯರಿಗೆ ನೆನಪಿನ ಕಾಣಿಕೆಗಳೊಂದಿಗೆ ಗೌರವಿಸಿದರು.
ಕಾರ್ಯಕ್ರಮದಲ್ಲಿ
ಕೇಂದ್ರ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡರು, ಜಿಲ್ಲಾ ಆಶ್ರಿತ ರೋಗ ವಾಹಕ ನಿಯಂತ್ರಣ ಅಧಿಕಾರಿಗಳಾದ ಡಾಕ್ಟರ್ ಧರ್ಮೇಂದ್ರ, ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿಗಳಾದ ಡಾಕ್ಟರ್ ಶಾಂತಲಾ ಹಾಗೂ ಸಮಸ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಭಾಗವಹಿಸಿದ್ದರು.

Comments
Post a Comment