ಜನವರಿಯಲ್ಲಿ ನಡೆಯಲಿರುವ 2023ರ ವೇಮಾ ಶೃಂಗಸಭೆಗೆ ಮುನ್ನುಡಿ
ಜನವರಿಯಲ್ಲಿ ನಡೆಯಲಿರುವ 2023ರ ವೇಮಾ ಶೃಂಗಸಭೆಗೆ ಮುನ್ನುಡಿ
ಮುನ್ನುುಬೆಂಗಳೂರು: ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ವಲಯದಿಂದ ಸಾಮಾಜಿಕ ಹೊಣೆಗಾರಿಕೆಯ ವಿಧಾನ ಹಾಗೂ ಸರ್ಕಾರೇತರ ಸಂಸ್ಥೆಗಳು ಹೇಗೆಲ್ಲ ಕೆಲಸ ಕಾರ್ಯಗಳು ಮಾಡಬೇಕು ಎಂಬುದರ ಕುರಿತಾಗಿ 2023, ಜನವರಿ 26,27, ಮತ್ತು 28ರಂದು ಬೆಂಗಳೂರಿನಲ್ಲಿ 'ವೇಮಾ ಶೃಂಗಸಭೆ' ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು
ಅಂತರಾಷ್ಟ್ರೀಯ ಮತ್ತು ಭಾರತೀ ಯ ಸಂಗಮಾಸ್ ಸಾವಯವ ಕೃಷಿ ಸಂಘದ ಅಧ್ಯಕ್ಷ ಡಾ.ಮುರುಗೇಶನ್ ತಿಳಿಸಿದ್ರು.
ಬೆಂಗಳರಿನ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ ಕೊಂಡಜ್ಜಿ ಸಭಾಂಗಣದಲ್ಲಿ ವೇಮಾ ಸಮಿತ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಎಸ್ಆರ್ ಸಹಭಾಗಿತ್ವದಲ್ಲಿ ಯೋಜನೆಗಳ, ಕಾರ್ಯಕ್ರಮಗಳನ್ನು ವೇಮಾ ಸಂಸ್ಥೆ ನೀಡುತ್ತಿದ್ದು, ವೈಯಕ್ತಿಕ,ಕಾರ್ಪೊರೇಟ್ ಮತ್ತು ಸರ್ಕಾರೇತರ ಸಂಸ್ಥೆಗಳು ಜೊತೆಯಾಗಿ ಸಶಕ್ತ ವಿಶ್ವವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ವೇಮಾ ಸಂಸ್ಥೆಯ ಮುಖ್ಯ ಉದ್ದೇಶ ಶಿಕ್ಷಣ, ವೈದ್ಯಕೀಯ,ಕೃಷಿ, ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡು ಹೊಣೆಗಾರಿಕೆಯಲ್ಲಿ ಕೆಲಸ ಮಾಡುತ್ತದೆ. ಕೇವಲ ಕಾರ್ಪೊರೇಟ್ ವಲಯದಿಂದ ಅನುದಾನ ಪಡೆದುಕೊಳ್ಳುವ ಕೆಲಸವಲ್ಲದೆ ಯೋಜನೆ ಕಾರ್ಯರೂಪ ಹಾಗೂ ಫಲಪ್ರದ ಹೇಗೆ ಆಗಿದೆ ಎಂಬುದರ ಬಗ್ಗೆ ಅಂಕಿ ಅಂಶ ದಾಖಲಿಸಬೇಕು.
ವಿದೇಶದಿಂದ ಬರುವ ಅನುದಾನವನ್ನೂ ಕೆಲ ಸರ್ಕಾರೇತರ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ವಿದೇಶಿ ನಿಧಿಗಳು ಯಾವುದೇ ಎಂಜಿಓಗಳಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಾಗಿದೆ. ಯೋಜನೆಯಲ್ಲಿ ವೈಯಕ್ತಿಕ ಸಾಮಾಜಿಕ ಹೊಣೆಗಾರಿಕೆಯ ಪಾತ್ರ ಮುಖ್ಯವಾಗಿದ್ದು, ಸಶಕ್ತರು ಮುಂದೆ ಬಂದು ಸಹಾಯ ಹಸ್ತ ಚಾಚಬೇಕಿದೆ.
ಮೂರು ದಿನಗಳ ಕಾಲ ನಡೆಯುವ ಶೃಂಗಸಭೆಯಲ್ಲಿ ವಿವಿಧ ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಪಾಲ್ಗೊಂಡು ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ವೇಮಾ ಶೃಂಗಸಭೆ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಮಹೇಶಜ್ಜ ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮೀಜಿ, ಗುರು ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಳಗೇರಿ ಮಠ ಕುಷ್ಟಗಿ,ಶ್ರೀ ಬಸವ ಸೇವಾಲಾಲ್ ಸರ್ದಾರ್ ಗುರೂಜಿ ಬಂಜಾರಾ ಸೇವಾಲಾಲ್ ಚಿತ್ರದುರ್ಗ, ಸಂಸ್ಥೆಯ ಉಪಾಧ್ಯಕ್ಷ ಸುಮೇಶ್ ಎಸ್ ಸೇರಿ ಪದಾಧಿಕಾರಿಗಳು, ಎನ್ ಜಿಒ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Comments
Post a Comment