ಪೀಪಲ್ ಕೇರ್ ಆಸ್ಪತ್ರೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ
"ಪೀಪಲ್ ಕೇರ್ ಆಸ್ಪತ್ರೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಮದುರೆ ಹೋಬಳಿ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆ ಕನಸವಾಡಿಯ ಬೆಳ ವಂಗಲಕ್ರಾಸ್ ಬಳಿ ಇರುವ ಪೀಪಲ್ ಕೇರ್ ಹಾಸ್ಪಿಟಲ್ ನ 2ನೇ ವಾರ್ಷಿಕೋತ್ಸವದ ಅಂಗವಾಗಿ ನವರಂಗ್ ಸ್ವಯಂ ಪ್ರೇರಿತ ರಕ್ತ ನಿಧಿಯವರ ಸಹಯೋಗದೊಂದಿಗೆ ರಕ್ತದಾನಶಿಬಿರ ಹಾಗೂ ಅರೋಗ್ಯ ಶಿಬಿರವನ್ನು ಗ್ರಾಮಾಂತರ ಜನರ ಅರೋಗ್ಯದ ಹಿತದೃಷ್ಹಿಹಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಮದುರೆ ಹೋಬಳಿ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯಶಿಬಿರ ಏರ್ಪಡಿಸಲಾಗಿದ್ದು, ಜನಸಾಮಾನ್ಯರಿಗೆ ಒಳ್ಳೆಯ ಅರೋಗ್ಯಕಡಿಮೆ ದರದಲ್ಲಿ ನಮ್ಮಆಸ್ಪತ್ರೆಯಲ್ಲಿ ಸಿಗುವುದಾಗಿ ಪೇಪಲ್ ಕೇರ್ ಅಸ್ಪಿಟಲ್ ನ ವ್ಯೆದ್ಯರು ತಿಳಿಸಿದರು.ಈ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಕೊಂಡ ರೋಗಿಗಳಿಗೆ ಮಾತ್ರೆ ವಿತರಿಸಿದರು, ಈ ರಕ್ತಧಾನ ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು, ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಣ್ಣು ಹಂಪಲು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ವೇಳೆ ಬಂದಿದ್ದ ಜನಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
" ಡಾಕ್ಟರ್ ಚೌಢಯ್ಯ, ಡಾಕ್ಟರ ಯತೀಶ್ ಕುಮಾರ್, ಡಾಕ್ಟರ್ ಆದಿತ್ಯ ಜಿ.ಕೆ, ಡಾಕ್ಟರ್ ವಿಕಾಸ್ ಪಾಟೀಲ್, ಡಾಕ್ಟರ್ ವೆಂಕಟೇಶ್, ಡಾಕ್ಟರ್ ಅವಿನಾಶ್ ಪಾರ್ಥಸಾರಥಿ, ಡಾಕ್ಟರ್ ಅರುಣ್ ಸಿ. ಎಂ.ಪ್ರಶಾಂತ್ ಸಿ. ಡಾಕ್ಟರ್ ಆದಿತ್ಯ, ಡಾಕ್ಟರ್ ಶರವಣ್ಣ, ಡಾಕ್ಟರ್ ಪ್ರಸನ್ನ ಕುಮಾರ್, ಡಾಕ್ಟರ್ ರಮೇಶ್, ಡಾಕ್ಟರ್ ಶಿವಪ್ರಕಾಶ್, ಡಾಕ್ಟರ್ ಕಿರಣ್ ಕುಮಾರ್, ಡಾಕ್ಟರ್ ಗಜಾನನ ಟಿ. ಎಸ್. ಡಾ ಶಾಂತಕುಮಾರ್, ಡಾಕ್ಟರ್ ಮಹೇಶ್ ಪಾಟೀಲ್, ಈ ಎಲ್ಲಾ ವ್ಯೆದ್ಯರುಗಳು ಭಾಗವಹಿಸುವ ಮೂಲಕ ಅರೋಗ್ಯ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು.

Comments
Post a Comment