"ಚಿಕ್ಕದಾಸರಹಳ್ಳಿಯಲ್ಲಿ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮದ ಭೂಮಿಪೂಜೆ ಕಾರ್ಯಕ್ರಮ "
" "ಚಿಕ್ಕದಾಸರಹಳ್ಳಿಯಲ್ಲಿ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮದ ಭೂಮಿಪೂಜೆ ಕಾರ್ಯಕ್ರಮ "
ಚಿಕ್ಕಬಳ್ಳಾಪುರಜಿಲ್ಲೆ ಶಿಡ್ಲಘಟ್ಟ ತಾಲೂಕು ಚಿಕ್ಕದಾಸರಹಳ್ಳಿಯಲ್ಲಿ ನೂತನವಾಗಿ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮ-ಭೂಮಿ ಪೂಜೆ ಕಾರ್ಯಕ್ರಮವನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಮುನಿಯಪ್ಪನವರು, ಇಸ್ರೋದ ಮುಖ್ಯಸ್ಥರಾದ ಕಿರಣ್ ಕುಮಾರ್, ರವಿರವರು ಬಿಳಿಶಿವಾಲೆ, ಹುಲಿಕಲ್ ನಟರಾಜ ರವರು, ಶಿಡ್ಲಘಟ್ಟ ತಹಸಿಲ್ದಾರ್, ನೆರವೇರಿಸಿದರು, ನಂತರಐತಿಹಾಸಿಕ ಪ್ರಸಿದ್ಧವಾದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ ವಿಜ್ಞಾನಜ್ಯೋತಿಜಾಥ ಕಾರ್ಯಕ್ರಮಕ್ಕೆ ಚಾಲನೆನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಲಿಕಲ್ ನಟರಾಜ್ ರವರುವೈಜ್ಞಾನಿಕ ಪರಿಷತ್ ನಮ್ಮ ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಕೃತಿಯನ್ನು ಸಂಸ್ಕಾರವನ್ನು ಧರ್ಮವನ್ನು ಆಚರಣೆಯನ್ನು ಜೊತೆಯಲ್ಲಿಜೊತೆಗೆ ಈವಿಜ್ಞಾನವನ್ನು ಮೇಲೆತರುವ ನಿಟ್ಟಿನಲ್ಲಿ ಸಾಕ್ಷಿಯಾಗಿದೆ.ಧರ್ಮ ಜ್ಯೋತಿಯೊಂದಿಗೆ ವಿಜ್ಞಾನಜ್ಯೋತಿ ಮೊಳಗುತ್ತಿದೆ. ಕೆಲವರು ಪ್ರಶ್ನೆ ಮಾಡಬಹುದು ಧರ್ಮವೆಂದರೆ ಇನ್ನೊಬ್ಬರಮನಸ್ಸಿಗೆ ನೋವುಂಟಾಗದ ರೀತಿಯಲ್ಲಿ ನಡೆದುಕೊಳ್ಳುವುದು ನಿಜವಾದಧರ್ಮ ಅಂತಹಧರ್ಮವನ್ನು ಜೊತೆಯಲ್ಲಿಟ್ಟುಕೊಂಡು ವೈಜ್ಞಾನಿಕ ಧರ್ಮವನ್ನುಇಡೀ ಜಗತ್ತಿಗೆ ಕೊಡುವ ಕೆಲಸಮಾಡುತ್ತಿದೆ. ಅದಕ್ಕೆ ಸಾಕ್ಷಿಯಾಗಿರುವ ಇಸ್ರೋದಕಿರಣ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಾಸರಹಳ್ಳಿಯಲ್ಲಿ 10ಎಕರೆಜಮೀನಿನಲ್ಲಿ ಭೂಮಿಪೂಜೆ ಮಾಡಿಕೊಂಡು ಜ್ಯೋತಿ ಪ್ರಾರಂಭ ಮಾಡಿದ್ದೇವೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಆಯೋಜಿಸಿರುವ ಜ್ಞಾನಜ್ಯೋತಿ ಜಾಥವನ್ನು ಶಿಡ್ಲಘಟ್ಟ ನಗರದ ಮೂಲಕ ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಬೆಳವಂಗಲ,ದಾಬಸ್ ಪೇಟೆ,ಮಾರ್ಗವಾಗಿ ಸಂಜೆ ವೇಳೆಗೆ ತುಮಕೂರು ತಲುಪುತ್ತದೆ. ಈ ಜಾಥದಲ್ಲಿಸ್ಥಳೀಯ ಮುಖಂಡರುಗಳು ವಿದ್ಯಾರ್ಥಿಗಳು, ರೈತರು,ನಾಗರಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎನ್. ಶೋಭ
Public report ವರದಿಗಾರರು. ಚಿಕ್ಕ ಬಳ್ಳಾಪುರ ಜಿಲ್ಲೆ.

Comments
Post a Comment