SSLC ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಬದಲಾವಣೆ ಸ್ವಾಗತಾರ್ಹ ನಿರ್ಧಾರ ಕುರಿತು ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ಸಂತೋಷ್ ಭಾರತಿ ಗುರೂಜಿ, ಶಿಕ್ಷಣ ತಜ್ಞರಾದ ಶ್ರೀಯುತ.
SSLC ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಬದಲಾವಣೆ ಸ್ವಾಗತಾರ್ಹ ನಿರ್ಧಾರ ಕುರಿತು ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ಸಂತೋಷ್ ಭಾರತಿ ಗುರೂಜಿ, ಶಿಕ್ಷಣ ತಜ್ಞರಾದ ಶ್ರೀಯುತ.
ಡಾ// ಎಚ್.ಎಸ್ ಗಣೇಶ್ ಭಟ್ಟರು, K AM S ಅಧ್ಯಕ್ಷರಾದ ಶ್ರೀಯುತ ಡಿ. ಶಶಿಕುಮಾರ್, ಶ್ರೀ ಅನುಪಮ ವಿದ್ಯಾಮಂದಿರ ಪ್ರಾಂಶುಪಾಲರಾದ ಶ್ರೀಯುತ. ಬಿ ಕೆ ವೆಂಕಟೇಶ್, ಕನ್ನಡ ಡಿಂಡಿಮ ಪ್ರತಿಷ್ಠಾನದ ಸದಸ್ಯರಾದ ಶ್ರೀಯುತ ನವೀನ್ ಹೆಗಡೆ ಹಾಗೂ ಶ್ರೀಯುತ ಸೋಮಶೇಖರ್ ಕಾರಜೋಳ ಇವರ ಉಪಸ್ಥಿತಿಯಲ್ಲಿ 04/11/2025 ರ ಮಂಗಳವಾರ ಬೆಂಗಳೂರಿನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು.
ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂಥದ್ದು, ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಶಿಕ್ಷಣವು ಒಬ್ಬ ವ್ಯಕ್ತಿಯಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವುದೇ ಆಗಿದೆ. ಮಹಾತ್ಮ ಗಾಂಧೀಜಿ ಅವರ ಮಾತುಗಳಲ್ಲಿ ಅದು Man making ಆಗಿದೆ.
ಶಿಕ್ಷಣ ಕೇವಲ ಪಠ್ಯವಸ್ತು- ಪಠ್ಯಪುಸ್ತಕದ ಜ್ಞಾನಾರ್ಜನೆಯಿಂದ ಪಡೆಯುವ ಅಂಕಗಳ ಮೇಲೆ ನಿರ್ಧಾರವಾಗುವುದಿಲ್ಲ, ಶಿಕ್ಷಣ ಎಲ್ಲರನ್ನೂ ಒಳಗೊಂಡಿರಬೇಕು. (Education for All) ಶಿಕ್ಷಣದಲ್ಲಿ ಸಮನ್ವಯತೆಯು ಮುಖ್ಯ ಅದು ವೈಯಕ್ತಿಕ ಭಿನ್ನತೆ
Individual differences) ಯನ್ನು ಗುರುತಿಸಿ ಅವರ ಪ್ರತಿಭೆಗೆ ತಕ್ಕಂತೆ ಶಿಕ್ಷಣವನ್ನು ಒದಗಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಬೌದ್ಧಿಕ, ದೈಹಿಕ, ಮಾನಸಿಕ, ಮನೋಜ್ಞಾನ ಅಂಶಗಳೆಲ್ಲದಕ್ಕೂ ಪ್ರಾಮುಖ್ಯತೆಯನ್ನು ಕೊಡಬೇಕು. ಪ್ರಸಕ್ತವಾಗಿ ನಡೆಯಿತ್ತಿರುವ ಖ ಖ ಐ ಅ ಪರೀಕ್ಷೆಯಲ್ಲಿ ಬೌದ್ಧಿಕ ಅಂಶಗಳಿಗೆ ಹೊರತಾದ ಕಲೆ, ದೈಹಿಕ ಶಿಕ್ಷಣ, ಕಾರ್ಯಾನುಭವ, ಮನೋಭಾವ ಮತ್ತು ಮೌಲ್ಯಗಳು ಮುಂತಾದುವಕ್ಕೆ Part 'B' ಯಲ್ಲಿ ಶ್ರೇಣಿಗಳನ್ನು (A, B, C,D) ನೀಡಲಾಗುತ್ತಿದೆ. ಇವು ಯಾವುದನ್ನೂ ವಿದ್ಯಾರ್ಥಿಯ ಅಂತಿಮ ಫಲಿತಾಂಶಕ್ಕೆ ಪರಿಗಣಿಸುತ್ತಿಲ್ಲ.
ಆಂತರಿಕ ಅಂಕಗಳ ಪರಿಗಣನೆಯಲ್ಲಿ ನಾಲ್ಕು ಕಿರುಪರೀಕ್ಷೆ ಹಾಗೂ ಎಂಟು
ಯೋಜನಾಕಾರ್ಯಗಳಾಗಿರುತ್ತವೆ(Project), ಒಟ್ಟು ಆರು ವಿಷಯ FA, FA, FA, FA ಗಳಿಂದ ಒಬ್ಬ ವಿದ್ಯಾರ್ಥಿ ಒಟ್ಟು 12 ಕಿರುಪರೀಕ್ಷೆಗಳು ೪೮ ಯೋಜನಾಕಾರ್ಯಗಳಲ್ಲಿ ಪಾಲ್ಗೊಂಡಿರುತ್ತಾನೆ. ಈ ಎಲ್ಲವುಗಳಿಂದ ಬಂದ ಅಂಕಗಳ ಸರಾಸರಿಯನ್ನು ಆಂತರಿಕ ಅಂಕವನ್ನಾಗಿ ಪರಿಗಣಿಸಲಾಗುತ್ತದೆ.
ಇಷ್ಟೆಲ್ಲಾ ಚಟುವಟಿಕೆಯಲ್ಲಿ ತೊಡಗಿ ಗಳಿಸಿದ ಆಂತರಿಕ ಅಂಕಗಳನ್ನು ವಿದ್ಯಾರ್ಥಿಯ ತೇರ್ಗಡೆಗೆ KSEAB ಈವರೆಗೂ (ಏಪ್ರಿಲ್ 2025) ಪರಿಗಣಿಸುತ್ತಲೇ ಇರಲಿಲ್ಲ. ಭಾರತದ ಎಲ್ಲಾ ರಾಜ್ಯಗಳಲ್ಲಿ ಬೆರಳೆಣಿಕೆಯ ರಾಜ್ಯಗಳನ್ನು ಹೊರತುಪಡಿಸಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಂತರಿಕ ಅಂಕಗಳನ್ನು ತೇರ್ಗಡೆಗೆ CBSE, ICSE, NIOS ಪದ್ಧತಿಗಳಂತೆ ಪರಿಗಣಿಸಿ, ಒಟ್ಟು ಅಂಕಗಳ ಶೇಕಡಾ 33 ಇದ್ದಲ್ಲಿ ವಿದ್ಯಾರ್ಥಿಯನ್ನು, ಏಪ್ರಿಲ್ 2025 ರ ಪರೀಕ್ಷೆ ಹಾಗೂ ನಂತರದ SSLC ಪರೀಕ್ಷೆಯಲ್ಲಿ ತೇರ್ಗಡೆ ಎಂದು ಘೋಷಿಸಲು ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾದದ್ದು.
SSLC ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟಿಸುವಾಗ ವಿದ್ಯಾರ್ಥಿಗಳ, ಮನೋಭೂಮಿಕೆಯನ್ನರಿತು, ವೈಯಕ್ತಿಕ ಭಿನ್ನತೆಯನ್ನು ಪರಿಗಣಿಸಿ ಬಹುತೇಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಹಕರಿಸುವುದು ಅತಿಮುಖ್ಯ. ಇದರಿಂದಾಗಿ ಲಕ್ಷೆಪಲಕ್ಷ ವಿದ್ಯಾರ್ಥಿಗಳಿಗೆ
ಶಾಲಾಹಂತದ ಕಡೆಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಸಮಾಧಾನವಿದ್ದು, ಅವರ ಜೀವಕ್ಕೆ ಹಾನಿಯಾಗದಂತೆ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಹಕಾರಿಯೆನಿಸುತ್ತದೆ.
SSLC ಪರೀಕ್ಷೆಯಲ್ಲಿ Fail ಎಂಬ ಹಣೆ ಪಟ್ಟಿಯಿಂದ ಹೊರಬಂದಂತಾಗುತ್ತದೆ. ಈ ರೀತಿ ಫಲಿತಾಂಶ ಪ್ರಕಟಣೆ ಮಾಡುವುದರಿಂದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇದರಿಂದಾಗಿ ಶಾಲೆಗಳ ಶೈಕ್ಷಣಿಕ ಜವಾಬ್ದಾರಿ ಇನ್ನೂ ಮೌಲೀಕೃತವಾಗುತ್ತದೆ.
ಈ ಎಲ್ಲಾ ಅಂಶಗಳನ್ನೂ ಮನಗಂಡು ಕರ್ನಾಟಕ ಘನ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹ.
-ಶ್ರೀ ಶ್ರೀ ಶ್ರೀ ಡಾ// ವಿದ್ಯಾವಾಚಸ್ಪತಿ ಸಂತೋಷ್ ಭಾರತಿ ಗುರೂಜಿ
-ಶ್ರೀಯುತ ಡಾ// ಎಚ್.ಎಸ್ ಗಣೇಶ್ ಭಟ್ಟರು, ನಿವೃತ್ತ ಪ್ರಂಶುಪಾಲರು,
ಎಂ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು.
9513999898 ರಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments
Post a Comment