ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ
ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ.
ಬೆಂಗಳೂರು ನವೆಂಬರ್ 28; ಬೆಂಗಳೂರು ನಗರ ಜಿಲ್ಲೆ ಭೂದಾಖಲೆಗಳ ಉಪನಿರ್ದೇಶಕ ಸುಜಯ್ ಕುಮಾರ್ ಕರ್ತವ್ಯಕ್ಕೆ ಬಂದಾಗಿನಿಂದ ಸುಮಾರು 4000 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಜೈ ಬೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಆರೋಪಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಆರ್.ಮುನಿರಾಜು,ಸುಮಾರು 1 ಎಕರೆ ಪೋಡಿಗೆ 40 ರಿಂದ 50 ಲಕ್ಷಕ್ಕೆ ಬೇಡಿಕೆ ಇಟಿದ್ದು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಲು ಕೆಲವು ಭೂಗಳ್ಳರ ಜೊತೆ ಹಾಗೂ ಡೆವೆಲಪರ್‌ಗಳ ಜೊತೆ ಕೈ ಜೋಡಿಸಲು ಇವರ ಜೊತೆ ಶ್ರೀನಿವಾಸ್ ಹಾಗೂ ಭಾನುಪ್ರಕಾಶ್ ರವರನ್ನು ಬಳಸಿಕೊಂಡು ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಇವರ ವಿರುದ್ಧ ಲೋಕಾಯುಕ್ತ, ಸಿಓಡಿ, ಸಿಬಿಐ, ತೆರಿಗೆ ಇಲಾಖೆಗಳಿಂದ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅಮಾನತ್ತುಗೊಳಿಸಬೇಕು ಎಂದು ಹೇಳಿದರು.
ಭೂದಾಖಲೆಗಳ ಇಲಾಖೆಯಲ್ಲಿ ಈಗಾಗಲೇ 4000 ಅರ್ಜಿಗಳು ವಿಲೇವಾರಿ ಇದ್ದು ಅವುಗಳನ್ನು ತುರ್ತಾಗಿ ಕರ್ತವ್ಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೈಲುಗಳನ್ನು ನೀಡಿ ಕೆಲವು ಸಾರ್ವಜನಿಕರು ಮಾಹಿತಿಗಳನ್ನು ಕೇಳಿರುವ ಅರ್ಜಿಗಳಿಗೆ ಉತ್ತರಗಳನ್ನು ನೀಡಿ ನ್ಯಾಯ ಕೊಡತಕ್ಕದ್ದು ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಈಗಾಗಲೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಆರ್.ಎ ಮತ್ತು ಆರ್.ಪಿ ಮತ್ತು ಪಿ.ಟಿ.ಸಿ.ಎಲ್ ದಾವೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ದಲಿತರಿಗೆ ನ್ಯಾಯವನ್ನು ಒದಗಿಸಬೇಕು,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಪಟ್ಟ ಪಂಚಾಯ್ತಿಗಳಾದ ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2020 ರಿಂದ 2025 ರ ತನಕ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಸದಸ್ಯರನ್ನು ಸದಸ್ಯ ಸ್ಥಾನದಿಂದ ಅಮಾನತ್ತುಗೊಳಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಸಹ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಲಿತರಿಗೆ ನ್ಯಾಯ ಸಿಗದೇ ದಲಿತರು ಪರದಾಡಿ ಎಷ್ಟು ಅಧಿಕಾರಿಗಳನ್ನು ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ದಲಿತರ ಪರವಾಗಿ ನಿಲ್ಲುವುದಿಲ್ಲ. ಏನಿದ್ದರೂ ಹಣವಂತರ ಪರವಾಗಿ ಇರುತ್ತಾರೆ ಹೊರತು ದಲಿತರ ಪರವಾಗಿ ಇರುವುದಿಲ್ಲ, ಬಂಡಿಕೊಡಿಗೇಹಳ್ಳಿ ಬಿ.ಕೆ. ಮಂಜನ ಮೇಲೆ ಸುಮಾರು 20 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು ಅವನನ್ನು ಇದುವರೆವಿಗೂ ಪೊಲೀಸ್ ಅಧಿಕಾರಿಗಳೇ ಬಂಧಿಸಿದೆ ಅವನನ್ನು ಜೊತೆಯಲ್ಲಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

Comments
Post a Comment