ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ 107ನೇ ಸಂಸ್ಥಾಪನಾ ದಿನಾಚರಣೆ.
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ 107ನೇ ಸಂಸ್ಥಾಪನಾ ದಿನಾಚರಣೆ.
ಸಂಜೆ ಎಕ್ಸ್‌ಪ್ರೆಸ್ ಸುದ್ದಿ. ಬೆಂಗಳೂರು ನವೆಂಬರ್ 12; ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತನ್ನ 107ನೇ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿತ್ತು.
ಬೆಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಮುಖ್ಯಸ್ಥ ಕಲ್ಯಾಣ್ ವರ್ಮಾ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾರತದ ವಿವಿಧ ನಗರಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು,ದೇಶದಲ್ಲಿ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ 8,655 ಶಾಖೆಗಳು, 9,064 ಎಟಿಎಂಗಳನ್ನು ಹೊಂದಿದ್ದು ವ್ಯವಹಾರದ ಪ್ರಮಾಣದಲ್ಲಿ ಐದನೇ ಅತಿದೊಡ್ಡ ಪಿಎಸ್‌ಬಿ ಆಗಿದೆ ಸೆಪ್ಟೆಂಬರ್ 2025ರಲ್ಲಿ ಯೂನಿಯನ್ ಬ್ಯಾಂಕ್ ಆಪ್ ಇಂಡಿಯ ಒಟ್ಟು 22.10 ದಶಲಕ್ಷ ಕೋಟಿ ದಾಟಿದೆ,
ಟ್ರಿಲಿಯನ್ ದಾಟಿದೆ ಬ್ಯಾಂಕ್ ಒಂದು ಪಟ್ಟಿ ಮಾಡಲಾದ ಘಟಕವಾಗಿದ್ದು, ಭಾರತ ಸರ್ಕಾರ ಬ್ಯಾಂಕಿನ ಒಟ್ಟು ಷೇರು ಬಂಡವಾಳದಲ್ಲಿ ಶೇಕಡಾ 74.75ರಷ್ಟು ಪಾಲನ್ನು ಹೊಂದಿದೆ.ಇಡೀ ಕರ್ನಾಟಕದಲ್ಲಿ 721ಶಾಖೆಗಳನ್ನು ಹೊಂದಿದೆ ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Comments
Post a Comment