ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾಣ್ವೇಷಣಾ ಕಾರ್ಯಕ್ರಮ


ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾಣ್ವೇಷಣಾ ಕಾರ್ಯಕ್ರಮ

ಬೆಂಗಳೂರು 25 ಏಪ್ರಿಲ್ 2025: ಮದುವೆ ಆಗಲು ಬಯಸುತ್ತಿರುವ ಹಿಂದೂ ಹುಡುಗ, ಹುಡುಗಿಯರಿಗೆ ಸೂಕ್ತ ಸಂಗಾತಿ ಆರಿಸಿಕೊಡುವ ಉದ್ದೇಶದಿಂದ ಮೇ 3 ಮತ್ತು ಮೇ 4 ರಂದು ಬೆಂಗಳೂರು ಬಸವನಗುಡಿಯಲ್ಲಿರುವ ಗಾಯನ ಸಮಾಜದಲ್ಲಿ  “ಶುಭಸ್ಯ ಶೀಘ್ರಂ” ಎಂಬ ಹೆಸರಿನಲ್ಲಿ ಹಿಂದೂ ವಧು ವರನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ.


ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ವಧು- ವರರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿ ಅಂತರ್ಜಾತೀಯ ವಿವಾಹಕ್ಕೆ ಆಸಕ್ತಿ ತೋರಿಸುವವರಿಗೆ ವಿಶೇಷ ವಿಭಾಗವನ್ನು ರೂಪಿಸಲಾಗಿದೆ. ಜೊತೆಗೆ ಮರು ವಿವಾಹ ಆಗುವವರಿಗೂ ಸಂಗಾತಿ ಆಯ್ಕೆಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಟುಂಬದವರು ಮತ್ತು ಹಿರಿಯರ ಸಮ್ಮುಖದಲ್ಲಿ ವಧು ವರರು ನೇರ ಸಂವಾದ ನಡೆಸುವ ಮೂಲಕ ಸಂಗಾತಿ ಆಯ್ಕೆ ಮಾಡಬಹುದು.



ಕೃಷಿಕ ಕುಟುಂಬದ ವಧುಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪ್ರವೇಶ ಇರುತ್ತದೆ. ಮುಂಗಡ ನೋಂದಣಿ ಮಾಡುವವರು ಮೇ 1ರ ಒಳಗೆ ವಧು ಮತ್ತು ವರ ಹೆಸರು ನೀಡಿ  ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಅನ್ವೇಷಣಾ ಮೇಳ ಆಯೋಜಕರು ಫ್ಯೂಸ್ ನೆಟ್ವರ್ಕ್: 9108853377 / 8073762722

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

AILU Challenges BCI’s ‘Illegal’ Nomination of Karnataka Bar Council Chairman