ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾನ್ವೇಷಣಾ ಕಾರ್ಯಕ್ರಮ
ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾನ್ವೇಷಣಾ ಕಾರ್ಯಕ್ರಮ
ಬೆಂಗಳೂರು ವಾರ್ತೆ: ಮದುವೆ ಆಗಲು ಬಯಸುತ್ತಿರುವ ಹಿಂದೂ ಹುಡುಗ, ಹುಡುಗಿಯರಿಗೆ ಸೂಕ್ತ ಸಂಗಾತಿ ಆರಿಸಿಕೊಡುವ ಉದ್ದೇಶದಿಂದ ಮೇ 3 ಮತ್ತು ಮೇ 4 ರಂದು ಬೆಂಗಳೂರು ಬಸವನಗುಡಿಯಲ್ಲಿರುವ ಗಾಯನ ಸಮಾಜದಲ್ಲಿ "ಶುಭಸ್ಯ ಶೀಘ್ರಂ" ಎಂಬ ಹೆಸರಿನಲ್ಲಿ ಹಿಂದೂ ವಧು ವರನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ವಧು- ವರರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿ ಅಂತರ್ಜಾತೀಯ ವಿವಾಹಕ್ಕೆ ಆಸಕ್ತಿ ತೋರಿಸುವವರಿಗೆ ವಿಶೇಷ ವಿಭಾಗವನ್ನು ರೂಪಿಸಲಾಗಿದೆ. ಜೊತೆಗೆ ಮರು ವಿವಾಹ ಆಗುವವರಿಗೂ ಸಂಗಾತಿ ಅಯ್ಕೆಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಟುಂಬದವರು ಮತ್ತು ಹಿರಿಯರ ಸಮ್ಮುಖದಲ್ಲಿ ವಧು ವರರು ನೇರ ಸಂವಾದ ನಡೆಸುವ ಮೂಲಕ ಸಂಗಾತಿ ಆಯ್ಕೆ ಮಾಡಬಹುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಪ್ರವೇಶ ಶುಲ್ಕವಿದ್ದು, ವಧುವಿಗೆ ₹1000. ವರನಿಗೆ ₹2000 ನಿಗದಿಪಡಿಸಲಾಗಿದೆ. ಕೃಷಿಕ ಕುಟುಂಬದ ವಧುಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪ್ರವೇಶ ಇರುತ್ತದೆ. (ನಿಯಮಗಳು ಅನ್ವಯ) ಮುಂಗಡ ನೋಂದಣಿ ಮಾಡುವವರು ಮೇ 1ರ ಒಳಗೆ ವಧು ₹500 ಮತ್ತು ವರ ₹1500 ನೀಡಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9108853377 8073762722

Comments
Post a Comment