ಅಂಬೇಡ್ಕರ್ ವಾಡಿ ಹಿರಿಯ ಹೋರಾಟಗಾರ ಡಾ.ಎಂ.ಬೆಂಕಟಸ್ವಾಮಿ ಆಚರಿಗೆ 2025 ರ ‘ಭೀಮಸೇನಾನಿ’ಪ್ರಶಸ್ತಿ ಪ್ರಧಾನ
ಅಂಬೇಡ್ಕರ್ ವಾಡಿ ಹಿರಿಯ ಹೋರಾಟಗಾರ ಡಾ.ಎಂ.ಬೆಂಕಟಸ್ವಾಮಿ ಆಚರಿಗೆ 2025 ರ ‘ಭೀಮಸೇನಾನಿ’ಪ್ರಶಸ್ತಿ ಪ್ರಧಾನ

ದಿನಾಂಕ 01.01.2009 ರ ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಗಾಂಧಿನಗರ ಹೋಟೆಲ್ ಕಾನಿಷ್ಕ ಅಗೆ ಸಭಾಂಗಣದಲ್ಲಿ ಭೀಮಾ-ಕೊಡೇಂಗಾವ್ ವಿಜಯೋತ್ಸವ ಸಮಾರಂಭವನ್ನು ನಮ್ಮ ಸಂಘಟನೆ ಮತ್ತು ಮಿತ್ರ. ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ.
ನಾಡಿನ ಹಿರಿಯ ಅಂಬೇಡ್ಕರ್ ವಾದಿ ಮತ್ತು ಅಂಬೇಡ್ಕರ್ ಅವರೇ ಸಂಸ್ಥಾಪಿಸಿದ ನಾಲ್ಕು ಮಹಾ ಸಂಘಟನೆಗಳ ರಾಷ್ಟ್ರೀಯ ಮುಖಂಡರು ಮತ್ತು ಹೋರಾಟಗಾರರಾದ ಡಾ.ಎಂ.ವೆಂಕಟಸ್ವಾಮಿ ಅವರಿಗೆ ನಮ್ಮ ಸಂಘಟನೆಯು ಕೊಡಮಾಡುವ ಚೊಚ್ಚಲ ‘ಭೀಮಸೇನಾನಿ’ಪ್ರಶಸ್ತಿಯನ್ನು ಕೊಡಮಾಡುತ್ತಿದ್ದೇವೆ.ಕಳೆದ ನಲವತ್ತು ವರ್ಷಗಳಿಂದ ಸಮವಸ್ತ್ರಧಾರಿ ಸಮತಾ ಸೈನಿಕ ದಳ ಕಾರ್ಯಕರ್ತರನ್ನು ಪ್ರತಿವರ್ಷದ ಜನವರಿ 01ರಂದು ಪೂನಾ ನಗರಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಭೀಮಾ ಕೊರೇಂಗಾವ್ ಯುದ್ಧ ಸ್ಮಾರಕಕ್ಕೆ ಕರೆದುಕೊಂಡು ಹೋಗಿ ಅದರ ಇತಿಹಾಸ ಮತ್ತು ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುತ್ತಾ ಬಂದಿರುವ ಡಾ.ಎಂ.ವೆಂಕಟಸ್ವಾಮಿ ಅವರಿಗೆ ಈ ಪ್ರಶಸ್ತಿಯನ್ನು ಜನವರಿ 01ರ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಪ್ರಶಸ್ತಿಯು 10000 ನಗದು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಈ ಸಮಾರಂಭವನ್ನು ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತಾ ನಾಯಕ್ ಉದ್ಘಾಟಿಸುವರು. ಸಾಹಿತಿಗಳಾದ ಎನ್.ಜಿ.ಸಿದ್ದರಾಮಯ್ಯ,ಡಾ.ಮುಕುಂದರಾಜ್ ವಡ್ಡಗೆರೆ ನಾಗರಾಜಯ್ಯ, ಮುಂತಾದವರು ಮುಖ್ಯ ಅತಥಿಗಳಾಗಿ ಭಾಗವಹಿಸುವರು ಸಮತಾ ಸೈನಿಕ ದಳ,ದಲಿತ ಸಂರಕ್ಷ ಸಮಿತಿ, ಕರ್ನಾಟಕ ಭೀಮಸೇನೆ, ದಲಿತ ಟೈಗರ್ನ್,ಛಲವಾದಿ ಯುವ ಬ್ರಿಗೇಡ್ ಮುಂತಾದ ಮಿತ್ರ ಸಂಘಟನೆಗಳ ರಾಜ್ಯ ಮುಖಂಡರುಗಳು ಭಾಗವಹಿಸುವರು ಎಂದು ಕರ್ನಾಟಕ ಅಹಿಂದ ಹೋರಾಟ ಸಮಿತಿಯ ಮುಖಂಡರುಗಳಾದ ಡಾ. ಎಂ. ಮುತ್ತುರಾಜು, ಡಾ. ಆರ್. ಚಂದ್ರಶೇಖರ್, ಜಿ. ಅಂಜನಪ್ಪ, ಪ್ರದೀಪ್. ಹೆಚ್, ಎ. ಪಿ. ಸಂಪತ್ ಮತ್ತು ಇತರರ ಸಮ್ಮುಖದಲ್ಲಿ ತಿಳಿಸಲಾಯಿತು
Comments
Post a Comment