ಬೆಸುಗೆಯ ಹೊಸ ಆರಂಭ 'ಜೋಡಿ ನಂ.1' ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ
ಬೆಸುಗೆಯ ಹೊಸ ಆರಂಭ 'ಜೋಡಿ ನಂ.1' ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ ಬೆಂಗಳೂರು, 1st ಏಪ್ರಿಲ್ 2026: ಜೀ ಕನ್ನಡ ತಮ್ಮ ವೀಕೆಂಡ್ ಎಂಟರ್ಟೈನ್ಮೆಂಟ್ ಅನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ಹೊಸ ನಾನ್-ಫಿಕ್ಷನ್ ಶೋ ಜೋಡಿ ನಂ.1 ಏಪ್ರಿಲ್ 4 ರಿಂದ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಜನಪ್ರಿಯ ಹಿರಿತೆರೆ ಮತ್ತು ಕಿರುತೆರೆ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು ಜನರಿಗೆ ಈ ರಿಯಾಲಿಟಿ ಶೋ ದ ಮೂಲಕ ಜನರ ಮುಂದಿಡಲಿದೆ. ಅನುಭವಸ್ಥ ಮತ್ತು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳನ್ನು ಒಳಗೊಂಡ ಈ ಶೋನಲ್ಲಿ, ಮನರಂಜನೆ, ಭಾವನೆಗಳು ಮತ್ತು ನಮ್ಮ ಜೀವನಕ್ಕೆ ಹತ್ತಿರವಾದ ಕ್ಷಣಗಳು ಕಾಣಸಿಗಳಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ಅತ್ಯುತ್ತಮ ತೀರ್ಪುಗಾರರ ಬಳಗ ಈ ಶೋ ದ ಮತ್ತೊಂದು ಹೈಲೈಟ್. ಖ್ಯಾತ ನಟಿ, ನಿರೂಪಕಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ಕಿರುತೆರೆಯ ಎಲ್ಲರ ಅಚ್ಚುಮೆಚ್ಚಿನ ಜೋಡಿ ಅಮೃತಧಾರೆಯ ಭೂಮಿ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ಸ್ಯಾಂಡಲ್‌ವುಡ್‌ನ ಚಾರ್ಮಿಂಗ್ ಹೀರೋ ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರಾಗಿರಲಿದ್ದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮ ಅಪಾರ ಅನುಭವ ಮತ್ತು ವಿಭಿನ್ನ ವ್ಯಕ್ತಿತ್ವಗಳೊಂದಿಗೆ, ತೀರ್ಪುಗಾರರು ಕೇವಲ ತೀರ್ಪು ನೀಡ...